- Get link
- X
- Other Apps
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನೆಮಾ ಮುಗಿದಮೇಲೆ ನೀವು ಅದರಿಂದ ಹೊರಗೆ ಬರಬಹುದು. ಆದರೆ ಹಾಸ್ಟೆಲ್ ನಿಮ್ಮಿಂದ ಬೇಗ ಹೊರಗೆ ಬರೋಲ್ಲ. ಮೆಲುಕು ಹಾಕಿದಷ್ಟೂ, ನಿಮ್ಮ ಬಳಗದಲ್ಲಿ ಹಂಚಿಕೊಂಡಷ್ಟು ಆಳ ಹೆಚ್ಚು. ಹೇಳಲೇಬೇಕು ಅಂತ ನೆನಪಿಟ್ಟುಕೊಂಡು ಬಂದ ವಿಷಯಗಳ ಜೊತೆ ಸುಪ್ತ ಮನಸ್ಸಿಗೆ ತಾಗಿದ ಹಲವು ಕ್ಷಣಗಳು ಸಿನೆಮಾ ನೋಡಿ ಬಂದಾಗಿನಿಂದ ಅನುಭವಕ್ಕೆ ಬಂದಂತೆ... ಒಲಿದಂತೆ.. ಹೀಗೊಂದು ಇತ್ತಲ್ಲ ಡೈಲಾಗ್. ಅಲ್ಲೊಂದು ಟಾಂಗ್, ಇನ್ನೊಬ್ಬನ expression, ಮೂಲೆಯಿಂದ ತೂರಿ ಬರೋ ಪಟಾಕಿ, ಲೇಟ್ ಆಗಿ ಹೊಳೆಯೋ ಅರ್ಥಗಳು ಇತ್ಯಾದಿ. ಉಲ್ಟಾ T shirt ಎಕೋ, ಇವನ character ಥರಾನೇ ಇವ್ನು ನೆನಪೂ.. ಏನ್ ಹೇಳಿ ಅಂತ Late ಅಗಿ ತಿರುಗಿದ್ದು. Genie ಕಿವಿಯಲ್ಲಿ ಮಾತಾಡುವಾಗ ಕಚಗುಳಿ ನಗು, mobile ಗಳನ್ನ ಇಟ್ಟಿದ್ದ ಬ್ಯಾಗ್ ಕಳ್ಕೊಂಡಿದ್ದು. ಹಾಸ್ಟೆಲ್ ಮೆಲುಕಿನಲ್ಲಿ ಸಿಗೋ ಸಾವಿರ ಹೈಲೈಟ್ ಗಳಲ್ಲಿ ಒಂದು. ಪ್ರೊಟೆಸ್ಟ್ ಸ್ಯಾಂಗ್ ಮತ್ತೆ ಟ್ರೈಲರ್ ನಲ್ಲಿ ಹಲವರು ಪರಿಚಯ ಆಗಿದ್ರು, ಆ ಎಲ್ಲ ವಾಮನರು ಮಹಾಬಲಿಗಳಾಗಿ ನಮ್ಮ ತಲೆಮೇಲೆ ಕಾಲಿಡುವುದು ಸಿನಿಮಾದ ಕ್ರಿಯೇಟಿವ್ ತಿರುವುಗಳಲ್ಲಿ. ಕಥೆ ಬರೆದವರು ಇಲ್ಲಿರೋ ಎಲ್ಲ ಪಾತ್ರಗಳ ಜೊತೆ ಬದುಕಿದ್ದಕ್ಕೆ ಹೀಗೊಂದು ಪ್ರಪಂಚ ಸೃಷ್ಟಿಯಾಗಿದೆ ಅನಿಸುತ್ತೆ. ಪಾತ್ರ ಬರೆದರೆ, ತೆರೆಯ ಮೇಲೆ ಕಟ್ಟಿಕೊಟ್ಟರೆ ಮುಗಿಯಲ್ಲ ಕಟೌಟ್ ಆಗಬೇಕು ಅಂದ್ರೆ ಸುಮ್ನೇನಾ? ಚಿತ್ರತಂಡ ಥೀಯೇಟರ್ ಹೊರಗೆ ವಾರ್ಡನ್
Comments